Wednesday, July 23, 2008

ಆ ನಿನ್ನ ನೆನಪು

ಮೊದ ಮೊದಲು ನಿನ್ನೊಡನಿಟ್ಟ ಹೆಜ್ಜೆಯ ತಲ್ಲಣದಿ
ನಾಚಿ ನದಿ ಸೇರಿದೆ ಈ ಭೂಮಿಯ ಕಂಪನ
ನಾಡಿಯ ನೆತ್ತರು ನಿಂತಂತಾಗಿ ಒಂದು ಕ್ಷಣ
ಪ್ರತಿ ಗಳಿಗೆಯೂ ಮಾಡಿದೆ ಆ ದಿನಗಳ ಗುಣಗಾನ ||

ನೀ ನುಡಿದ ಪ್ರೆಮಸ್ವರ, 'ನಿನ್ನವಳೇ ನಾನೆಂದೂ..,ಎಂದೆದೂ'!
ಕಾಲಚಕ್ರ ಉರುಳಿದಂತೆ ನಿನಗೀಗ ನೆನಪಾಗದೇ? ಅಂದಿನ ರಾಗ
ಇದು ಮೋಕ್ಷವೋ?... ಮುಕ್ತಿಯೋ?...ತಿಳಿಯದೆ ಸತ್ತಿದೆ ನನ್ನುಸಿರು
ಬಾಡಿದ ಮನಸು ಕಾದಿದೆ ಹಸಿಯಾಗುವುದೆಂದು ಉಸಿರು||

ವಜ್ರ ಒಡವೆಯ ಹರಳಿನಂತೆ ಕೂಡಿಟ್ಟ ಕನಸುಗಳು
ಮುಂಜಾನೆಯ ರವಿ ನೋಡದ ಕಮಲವೊಂದರ ಮೊಗದಂತಾಯಿತೆ
ತೃಣ ಸ್ಪರ್ಶ ದೊರೆಯದ ಮಂಜಿನ ಹನಿಯ ನೋವಲ್ಲಿ ಸೇರಿ
ಉಸಿರುಳಿಸಿದೆ ಕೊನಿಗೂ ಆ ನಿನ್ನ ನೆನಪು ... ಆ ನಿನ್ನ ನೆನಪು||


- ಕೆ ಎಸ್ ರಾಜು

Friday, July 4, 2008

ಪ್ರೀತಿಯ ಮುನಿಸು

ಹೋಗುವೆಯಾ? ಉಸಿರೇ, ಹೃದಯವ ತೊರೆದು
ಹೋದಮೇಲೂ ಪ್ರೀತಿಸುವೆಯ, ಈ ಬಡ ದೇಹವ ||

ನೀನಿಲ್ಲದ ಬಾಳು, ನೆನಪಿನ ನೋವುಗಳ ಸುಡುಗಾಡು
ಎದೆ ಹತ್ತಿ ಉರಿದು ಬೂದಿಯಾಗಲೊಲ್ಲದು
ಹೋಗುವೆಯಾ? ಉಸಿರೇ, ಹೃದಯವ ತೊರೆದು ||

ಮಾಡದ ತಪ್ಪಿಗೆ ಕ್ಷಮಾಯಾಚನೆ ಬೇಕೆ
ಸ್ವಾಭಿಮಾನವ ಬಿಟ್ಟು ಬದುಕುವುದೇಕೆ
ಹೋದರೆ ಹೋಗಿಬಿಡು, ನಿನಗೀಗ ತಿಳಿಯದು ಸತ್ಯ
ಅರಿವಾದ ಗಳಿಗೆಯೇ ಬಂದೇ ಬರುವೆ ಈ ಮುದ್ದು ಮನಸಿನ ಹತ್ರ ||

ಮಾತಲಿ ಕಟ್ಟಿದ ಗೂಡಿನ ಒಳಗೆ
ಬೆಚ್ಚಗೆ ಇಟ್ಟೆ ನಿನ್ನನ್ನು
ಸಣ್ಣಗೆ ಬಂದ ಬಿರುಗಾಳಿಗೆ ಹೆದುರಿ
ತೊರೆದೆಯ ಈ ಪುಟ್ಟ ಹೃದಯವನು ||

- ಕೆ ಎಸ್ ರಾಜು.

Tuesday, June 24, 2008

ಪ್ರೀತಿ ಎಷ್ಟು ಮಧುರ

ರವಿಯಾಗಿ ನಿನ್ನ ಬಾಳ ಬೆಳಗಲೆಂದು ಬಂದೆ
ತಂಗಾಳಿಯಾಗಿ ನೀ ನನ್ನ ಚಂದಿರನಾಗಿಸಿದೆ
ಕಲ್ಲು ಬಂಡೆಯಾಗಿ ಕರಗದೇ ಕುಳಿತಿದ್ದೆ
ಚೆಲುವೆ ಅಲೆಯಾಗಿ ನೀ ಬಂದು ಮುದ್ದಿಸಿದೆ
ನಿನ್ನ ಪ್ರೀತಿ ಎಷ್ಟು ಮಧುರ... ಪ್ರೀತಿ ಎಷ್ಟು ಮಧುರ ||

ಹೆತ್ತವಳ ಮಡಿಲಲ್ಲಿ ನಾನುಂಡ ಪ್ರೀತಿಯ
ಮರೆಮಾಡಿದೆ ನಿನ್ನ ಕಂಗಳ ಒಲವಿನ ಆಸರೆ
ಮೂಸಿಕನ ಮಾತಿಗೆ ಗಡಗಡ ಎನ್ನುವವ ನಾನು
ನನ್ನೀ ಜೀವವ ಅರ್ಪಿಸಿರುವೆ ಉಸಿರೇ
ನಿನ್ನ ಪ್ರೀತಿ ಎಷ್ಟು ಮಧುರ... ಪ್ರೀತಿ ಎಷ್ಟು ಮಧುರ ||


- ಕೆ ಎಸ್ ರಾಜು

Wednesday, June 4, 2008

ನಾ ಬರೆದೆ ನಿನಗಾಗಿ

ತಿಳಿಗಾಳಿಗೆ ತಂಪಾದ ಬೆಳ್ಳಿ ಮೋಡದಂತ್ತಿದ್ದೆ
ಇಂದೇಕೋ ಮಿಂಚಂತೆ ನೀ ಬಂದೆ
ಈ ಹುಚ್ಚು ಕಂಗಳ ಒಳಗೆ ಮೊದಲೇ ಬಿದ್ದೆ
ಹಸಿಯಾಗಿ ಈ ಮಯ್ಯ ನೀ ತೋಯ್ದೆ||

ಮೊಗವೆಲ್ಲ ಎಳೆ ಹುವ್ವಾಗಿ
ಮಯ್ಯೆಲ್ಲ ಗುಲಾಬಿ ರಂಗಾಗಿ
ನನ್ಮುಂದೆ ನಾಚುತ ನಿಂತಾಗ ನೀನಾಗಿ
ಎದೆ ಝಲ್ ಝಲ್ ಎಂದು ಗಡುಸಾಗಿ ಬೀರಿದೆ ಮುದ್ದಿಸು ಒಮ್ಮೆ||

ನಿನ್ನ ಮೊಗದಲ್ಲಿದ್ದ ಆ ಕೂಸ್ ತನ
ಕಂಗಳ ಅಂಚಲಿದ್ದ ಪ್ರೀತಿಯ ಆಲಿಂಗನ
ತುಟಿ ತೆರೆದಾಗ ನೀ ನುಡಿದ ಪ್ರೇಮಗಾನ
ಜಾಸ್ತಿ ಮಾಡಿದೆ ಇಂದು ನನ್ನ ಹುಚ್ಚುತನ ||


- ಕೆ ಎಸ್ ರಾಜು

Monday, June 2, 2008

ಪ್ರೇಮಿಗಳಿಗೆ ಪಿಸುಮಾತು

ಝುಳು ಝುಳು ಹರಿಯುವ ನೀರಿನ ಮೇಲಿನ ಗುಳ್ಳೆ
ಸೇರಿದೆ ಈ ಮನುಕುಲದ ಉಸಿರಿನಲಿ
ಪ್ರೀತಿ ಅಂತ ನುಡಿದ ಮಾತ್ರಕೆ, ಅವಳು ನಿನ್ನವಳಾಗಳು ಮಂಕೆ
ಎದೆಯಲ್ಲಿ ಇಟ್ಟು ಪೂಜಿಸು ಅವಳ, ನೀನಾಗುವೆ ಪ್ರೇಮಿ ||

ಎಷ್ಟು ಉಂಡರು ಸಾಲದು ಪ್ರೀತಿ
ಸವಿಸವಿಯುತ ರಸಬೀರುವ ನಿನ್ನೀ ಹೃದಯ
ಸತ್ತರೂ ಮುಗಿಯದ ನೀ ಕೊಟ್ಟ ಕನಸುಗಳು
ಪ್ರೀತಿಸುವೆ ನಾ ನಿನ್ನ ಮನಸಾರೆ, ಬಾ ನನ್ನ ಅಪ್ಪಿಕೊ ||

ಇದು ನಿಜ ಪ್ರೀತಿ, ಅದೇ ನನ್ನ ರೀತಿ
ನನ್ನೀ ಜೀವನ ಕತ್ತಲೆಯಲ್ಲಿ ಮುಳುಗಿದೆ ಗೆಳತಿ
ಬೆಳಕಾಗುವೆಯ ಈ ಬದುಕಲ್ಲಿ
ಕೈ ಹಿಡಿದು ನಡೆಸು ನನ್ನ, ಕೈ ಹಿಡಿದು ನಡೆಸು ನನ್ನ ||

-ಕೆ ಎಸ್ ರಾಜು

Wednesday, April 9, 2008

ಇದು ಪ್ರೀತಿನಾ... !!!

ಮನದ ಮುಗಿಲ ಮುಟ್ಟಿದ ತಂಗಾಳಿ
ಇಂದೇಕೋ ಬೀಸಿದೆ ನನ್ನೆದೆಯಲ್ಲಿ ಬಿರುಗಾಳಿ
ಕೈಗೆ ಎಟುಕದ ಸಿಹಿಗಾಳಿ,ತೂರಿದೆ ನನ್ನೆದೆಯಲಿ ಚಳಿಯಾಗಿ
ಇದು ಪ್ರೀತಿನಾ...! ಪ್ರೀತಿನಾ...!

ಗೆಳತಿಯ ಬರುವಿಕೆಗಾಗಿ ಕಾದ ಆ ಗಳಿಗೆ
ಬಂದಾಕ್ಷಣ ಕಣ್ತುಂಬಿ ಸಂತೈಸುವಳೆಂಬ ಬಯಕೆ
ನನ್ನ ಕಾಡಿ ಕಾಡಿ ಒರಗಿಸಿದೆ ಅವಳೆದೆಗೆ
ಇದು ಪ್ರೀತಿನಾ...! ಪ್ರೀತಿನಾ...!

ನನ್ನೆದುರು ಬಂದಾಗ, ಈ ಮನವೆಕೋ ತಿಳಿಯಾಗಿ
ಅವಳ ಬಾಡಿದ ಮೊಗನೋಡಿ, ನನ್ನುಸಿರು ಬಿಗಿಯಾಗಿ
ನನ್ನವಳ ಬಾಹು ಬಂದಿತನಾಗುವ ಆಸೆ!... ಹುಚ್ಚಾಗಿದೆ
ಇದು ಪ್ರೀತಿನಾ...! ಪ್ರೀತಿನಾ...!

ಕೇಳಲೇಬೇಕಿದೆ ಇಂದು ನಾ!

- ಕೆ ಎಸ್ ರಾಜು

Tuesday, April 1, 2008

ಮನಸಿನ ಒಳಗೆ ಸೇರ್ಕೊಂಡ್ರೆ

ಗೆಳೆಯನೊಬ್ಬನ ಮುದ್ದಿನ ಸ್ನೇಹ

ಸೇರ್ಕೊಂಡಿತ್ತು ನನ್ನಯ ಮನಸ್ಸು

ಬದುಕಿನ ಆಟಕೆ ಕ್ಷಣಗಣನೆ

ತಿನ್ನೋ ಅನ್ನಕ್ಕೆ, ಬದುಕಿನ ಜಂಜಾಟಕೆ

ಬವಣೆಯ ಭಾವನೆ ತಿಳಿದು

ದೂರ ಸರಿದ ಗೆಳೆಯನ ನೆನಪುಗಳು ಸೇರ್ಕೊಂಡಿದೆ ನನ್ನ ಮನ

ಕೂಡಿ ಕಳೆದ ಗಳಿಗೆಗಳೆಲ್ಲ

ಕುಂತರು ನಿಂತರು ಅವನ ಮಾತಿನ ತುಂತುರು

ಕಷ್ಟ ಎಂದಾಗ ಅತನಿತ್ತ ಕಣ್ಣೀರಿನ ಬಿಂಬ

ತೋರಿಸ್ತಿದೆ ಸ್ನೇಹವೆಷ್ಟು ಮಧುರ ಹಾಗೆ ಅಮರ

ಸ್ನೇಹಕ್ಕೆ ಎಂದು ಕೊನೆ ಇಲ್ಲ, ನಮ್ಮೀ ಸ್ನೇಹ ನಿಲ್ಲೋದಿಲ್ಲ

ಖುಷಿಯಾಗಿರು ನೀನು ಎಲ್ಲೇ ಇದ್ರು,

ಕ್ಲಿಷ್ಟವಾದ ಈ ಸ್ನೇಹ ಕಷ್ಟ ಆಗುತ್ತೆ ಮರೆಯೋದು

ಒಮ್ಮೆ ಮನಸಿನ ಒಳಗೆ ಸೇರ್ಕೊಂಡ್ರೆ

- ಕೆ ಎಸ್ ರಾಜು