Monday, October 19, 2009

ಭಯ

ಅದ್ಭುತವಾದ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೆರ್ಡೆವಿಲ್ಸ್ ನಡುವಣ ಕ್ರಿಕೆಟ್ ಮ್ಯಾಚ್ ಅನ್ನು ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಗಿಸಿ ಹುಡುಗರ ದಂಡೊಂದು ತಮ್ಮ ತಮ್ಮ ಮನೆಯ ಕಡೆಗೆ ತೆರಳಿದರು. ಆ ಗುಂಪಿನಲ್ಲಿದ್ದೋನು ನಾನು ಒಬ್ಬ.
ನನ್ನ ಆತ್ಮಿಯ ಮಿತ್ರ ಸುಧೀರನನ್ನು ಅವನ ಮನೆಗೆ ಡ್ರಾಪ್ ಮಾಡಿ ನನ್ನ ಮನೆ ಕಡೆ ಮುಖ ಮಾಡಿ ಬರುತ್ತಿರುವ ಸಂದರ್ಭದಲ್ಲಿ, ಅಗೊಚರವೋ, ಭಯಾನಕವೋ ಅಥವಾ ನನ್ನ ಗ್ರಹಚಾರವೋ ಎಂಬಂತೆ ನಮ್ಮ ಮನೆ ಬೀದಿಯಲ್ಲಿ ಅದೂ ನನ್ನ ಮನೆಯ ಸಮೀಪದ ರಸ್ತೆಯಲ್ಲಿ ನನ್ನ ಗಾಡಿಯ ಹೆಡ್ ಲೈಟ್ ಗೆ ಬಿದ್ದಿದ್ದು ಓರ್ವ ಮಹಿಳೆ, ಸಮಯ ನೋಡಲು ಕೈಗಡಿಯಾರದ ಕಡೆ ಕಿರುಗಣಿತ್ತರೆ ಮಧ್ಯ ರಾತ್ರಿ ೧ ಘಂಟೆ ೧ ನಿಮಿಷ.

ದೂರದಿಂದ ಗಾಡಿಯ ಹೆಡ್ ಲೈಟನ್ನು ಆಕೆಯ ಮೇಲೆ ಹರಿವಂತೆ ಮಾಡಿ ನಿದಾನವಾಗಿ ಮನೆಯ ಮತ್ತು ಸಮೀಪ ಚಲಿಸುತ್ತಿದ್ದೇನೆ. ಕಂಗೊಳಿಸುವ ಸೌಂಧರ್ಯ, ನೀಳವಾದ ರೇಷ್ಮೆ ಬಣ್ಣದ ಕೂದಲು ಒಂದಿದ್ದ ಆಕೆ ನೈಟಿ ಧರಿಸಿ ನಿದಾನವಾಗಿ ತನ್ನ ದೇಹವನ್ನು ಕೆಳಗೆ ಬಗ್ಗಿಸಿದಾಗಲಂತು? ಆನಂದಿಸುವ ಮನಸಿಗೆ ಸ್ವರ್ಗದ ಅಪ್ಸರೆ ಮಾಡುವ ನಾಟ್ಯದ ಆಕಾರವೇ ಇರಬಹುದು.
ಆಕೆ ನಿದಾನವಾಗಿ ತನ್ನ ಎರಡು ಕೈಗಳನ್ನು ಭೂಮಿಗೆ ತಾಗಿಸಿ ಕಲ್ಲುಗಳನ್ನು ಸಂಗ್ರಹಿಸುತ್ತಿದ್ದಾಳೆ. ಅಂದಂತೆ ನನ್ನ ಮನದಲ್ಲೂ ಕೂಡ ನಿಮಗೆ ಮೂಡುತ್ತಿರುವ ಭಾವನೆಗಳೇ ಘೋಚರವಗಿದ್ದು ಇಷ್ಟೇ!
ಮೊದಲನೆ ಯೋಚನೆ ಯಾರೋ ನಿದ್ದೆ ಬಾರದೆ ಹೊರಗೆ ಓಡಾಡುತ್ತಿದ್ದಾರೆ. ಎರಡನೇ ಯೋಚನೆ ಹುಚ್ಚಿ ಇರಬಹುದು. ಮೂರನೇ ಯೋಚನೆ ಬರುವಷ್ಟರಲ್ಲಿ ಹಾಗೆ ತನ್ನ ತಲೆ, ದೇಹ ಮತ್ತು ಕಲ್ಲುಗಳು ತುಂಬಿದ್ದ ಕೈಗಳನ್ನು ಭೂಸ್ಪರ್ಶದಿಂದ ವಿಂಗಡಿಸಿ ಮುಂದೆ ಗಾರ್ಭಟಿಸುತಿದ್ದ ನಾಯಿಗಳಿಗೆ ಹೊಡೆಯುತ್ತಿದ್ದಾಳೆ. ಅದೆಲ್ಲಿದ್ದವೋ ಅಷ್ಟೊಂದು ನಾಯಿಗಳು, ಆಕೆಯ ಕಡೆ ಜೋರಾಗಿ ಬೊಗಳುತಿದ್ದವು, ನಮ್ಮ ಮನೆಯ ಕಾವಲಿದ್ದ ನಾಯಿ ಕಂಪೌಂಡ್ ಮೇಲಿಂದ ನಿಂತು ಬೊಗಳುತ್ತಿತ್ತು, ಎಷ್ಟೋ ದೂರದಿಂದ ಓಡೋಡಿ ಬಂದು ಆಕೆಗೆ ಅಡ್ಡಲಾಗಿ ಬೊಗಳುತ್ತಿದ್ದವು. ಇನ್ನೇನು ಕೇವಲ ೧೦ ಅಡಿಗಳು ಬಾಕಿ ಆಕೆಗೂ ನನ್ನ ಗಾಡಿಗೂ, ನನ್ನ ಮನೆಯ ಬಾಗಿಲು ಹತ್ತಿರವಾಯಿತು, ಗಾಡಿಯ ಶಬ್ದ ಕೇಳಿ ಹಿಂದಿರುಗಿದಳು, ನೋಡಿದರೆ ವಯಸ್ಸಾದ ೬೦ರ ಆಸು ಪಾಸಿನ ಮಹಿಳೆ, ನಾನು ಬಂದು ಗಾಡಿ ನಿಲ್ಲಿಸಿ ಗೇಟ್ ಬೀಗ ತೆಗೆಯಲು ಮುಂದಾದೆ ಆದರು ಮುಖದಲ್ಲಿ ಭಯ, ಆತಂಕ, ದುಗುಡ ಎಲ್ಲಾ ಆವರಿಸಿತ್ತು, ಯಾಕೆಂದರೆ ನಮ್ಮ ಮನೆಯ ನಾಯಿ ಬಂದು ನನ್ನ ಪ್ಯಾಂಟ್ ಎಳೆಯುತ್ತಿತ್ತು, ಆದರು ಏನು ಭಯ ಅಂಥ ಅನ್ನಿಸಲಿಲ್ಲ, ಸುತ್ತ ನೋಡಿದರು ಒಂದು ಹಸು ಕೂಸಿನ ಸುಳಿವಿಲ್ಲ, ಎಲ್ಲರ ಮನೆಯ ಲೈಟ್ ಗಳು ಆಫ್ ಆಗಿವೆ, ಗೇಟ್ ಓಪನ್ ಮಾಡಿ ಮತ್ತೆ ಗಾಡಿಯತ್ತ ಹೋದೆ, ಆಕೆ ಒಂದು ಕಲ್ಲು ನನ್ನ ಕೈಗೆ ಎಸೆದು ಇದು ನಾಯಿಗೆ ಹೊಡೆಯಿರಿ ಸರ್ ಎಂದಳು. ತುಂಬಾನೇ ಬಿಸಿ ಇತ್ತು ಕಲ್ಲು.. ಆ ಚಳಿ ಚಳಿ ಇಡುವ ರಾತ್ರಿಯಲ್ಲಿ ಸುಡುತ್ತಿರುವ ಕಲ್ಲು ಏನೋ ಒಂದು ಥರ ಅನ್ನಿಸಿತು ಒಂದು ಗಳಿಗೆ ಆದರು ಮರು ಮಾತಾಡದೆ ನಾಯಿಗೆ ಎಸೆದೆ.
ಮತ್ತೆ ನಾನೇ ಕೇಳಿದೆ ಇಷ್ಟೊಂದು ರಾತ್ರಿಲಿ ಏನು ಮಾಡುತ್ತಿದ್ದೀರಿ ಅಂತ? ಯಾವುದೇ ಉತ್ತರವಿಲ್ಲದೆ ನನ್ನ ಕಡೆ ಹಿಂದುರಿಗಿ ನಡೆಯುತ್ತಿದ್ದಾಳೆ, ಸರಿ ನಾನು ಗಡಿ ಸ್ಟಾರ್ಟ್ ಮಾಡಿ ಒಳಗೆ ಪಾರ್ಕ್ ಮಾಡಿದೆ. ಒಂದೇ ನಿಮಿಷದಲ್ಲಿ ಆಕೆ ನನ್ನ ಗೇಟ್ ನ ಇನ್ನೊಂದು ಬದಿಯಲ್ಲಿ ನಾನು ಮತ್ತೊಂದು ಬದಿಯಲ್ಲಿ! ಅಲ್ಲೇ ನಿಂತು ನಮ್ಮ ಮನೆಯ ನಾಯಿಗೆ ಕಲ್ಲು ಎಸೆಯುತ್ತಿದ್ದಾಳೆ. ಸರಿ ಎಂದು ನನ್ನ ಪಾಡಿಗೆ ನಾನು ಗೇಟ್ ಲಾಕ್ ಮಾಡಲು ಮುಂದಾದೆ, ಲಾಕ್ ಮಾಡಿ ಕ್ಷಣಾರ್ಧದಲ್ಲೇ ತಲೆ ಎತ್ತಿ ನೋಡುತಿದ್ದೇನೆ, ನಿಮಗೆಲ್ಲ ಗೊತ್ತಿರುವಂತೆ ಲಾಕ್ ಮಾಡೋದು ೫ ಸೆಕೆಂಡ್ಸ್ ಕೂಡ ಆಗಿರಲಿಕ್ಕೆ ಇಲ್ಲ. ಅದೇ ೨ದು ಸೆಕೆಂಡ್ ಗಳಲ್ಲಿ ನನ್ನ ಮುಖದ ಮೇಲೆ ಬೆವರು ಬರುತ್ತಿದೆ, ಆತಂಕ ಭರಿತ ಉಸಿರು ಹೆಚ್ಚಾಯಿತು, ಕಣ್ಣುಗಳು ಅತಿ ವೇಗದಲ್ಲಿ ಆಕೆಯನ್ನು ಹುಡುಕಲು ಆರಂಬಿಸಿದವು, ಆಕೆ ಅಲ್ಲಿರಲಿಲ್ಲ!!! ಎಲ್ಲೂ ಇರಲಿಲ್ಲ ಇರಲಿಲ್ಲ, ಧೈರ್ಯ ಮಾಡಿ ಗೇಟ್ ತೆಗೆದು ಬೀದಿಗೆ ಬಂದು ಅಲ್ಲಿ ಸುತ್ತ ಮುತ್ತ ತಿರುಗುತಿದ್ದೇನೆ ಯಾರು ಕಾಣಿಸುತ್ತಿಲ್ಲ, ನಯಿಗಳೆಲ್ಲ ಬೊಗಳಲು ನಿಲ್ಲಿಸಿವೆ, ನಿಶ್ಯಬ್ಧದ ಆತಂಕ ನನ್ನ ಮನದಲ್ಲಿ ಕಚಕುಳಿ ಇಡುತ್ತಿದೆ, ಆಗಾಗಲೇ ೧:೦೫ ನಿಮಿಷ ಆಗಿತ್ತು, ಸರಿ ಅಂತ ಮತ್ತೆ ಗೇಟ್ ಲಾಕ್ ಮಾಡಿ ಮೆಟ್ಟಿಲುಗಳು ಏರಿ ಮನೆಗೆ ಬಂದು ಫ್ರೆಶ್ ಆಗಿ ನಂತರ ಮಲಗಲು ಹಾಸಿಗೆ ರೆಡಿ ಮಾಡಿ ಪ್ರತಿದಿನ ಬೆಳಿಗ್ಗೆ ಬಡಿಯುತಿದ್ದ ಅಲಾರಂ ಆಪ್ ಮಾಡಿ ಮೊಬೈಲ್ ನಲ್ಲಿ ಟೈಮ್ ನೋಡಿದಾಗೆ ಸಮಯ ೧:೧೫ ನಿಮಿಷ.
ಕಂಗಳು ಎಳೆಯುತಿದ್ದವು ಸರಿ ಎಂದು ಲೈಟ್ ಆಫ್ ಮಾಡಿ ಮನೆಯ ಹಾಲ್ ನಲ್ಲಿ ಮಲಗಿದೆ, ಎರಡು ನಿಮಿಷಗಳು ಕಳೆದಿರಲಿಲ್ಲ ತುಂಬ ನಿದ್ದೆ ಬರುವಂತೆಯೇ ಇತ್ತು, ಬೆಡ್ ರೂಂ ನಿಂದ ಬೆಕ್ಕೊಂದು ಕಿರಿಚುತಿತ್ತು, ನಮ್ಮ ಮನೆಯಲ್ಲಿ ಬೆಕ್ಕಿನ ಶಬ್ದ ಏನಿದು ಅಂಥ ತುಂಬ ಗಾಬರಿ ಆದೆ ಆದರೆ ಏನು ಮಾಡುವಂತಿರಲಿಲ್ಲ ನನ್ನ ಕೈಲಿ, ದಡ ಬಡ ಎದ್ದು ಲೈಟ್ಸ್ ಆನ್ ಮಾಡಿ ನಿದಾನವಾಗಿ ನನ್ನ ಹೆಜ್ಜೆ ಶಬ್ದ ನನಗೇ ಕೇಳದಂತೆ ಬೆಡ್ ರೂಂ ನತ್ತ ಚಲಿಸಿ ರೂಂ ನ ಬಾಗಿಲು ತೆರೆದೆ ಕತ್ತಲು ನನ್ನ ಕಣ್ಣಿಗೆ ಏನು ಕಾಣಿಸುತ್ತಿಲ್ಲ, ಬೆಕ್ಕಿನ ಶಬ್ದಾನು ಕೇಳಿಸುತ್ತಿಲ್ಲ ಹಾಗೆ ಮುಂದೆ ಸಾಗಿ ಲೈಟ್ ಆನ್ ಮಾಡಿದಾಕ್ಷಣ ನನ್ನ ಹೃದಯ ಒಂದು ಗಳಿಗೆ ನಿಂತಿತು , ಅಲ್ಲೇ ನಾನು ಸೂಸು ಮಾಡುವ ಪರಿಸ್ಥಿತಿಯಾಯಿತು. ಕಪ್ಪಗಿನ ಬೆಕ್ಕೊಂದು ಬಾಗಿಲ ಕಡೆ ದಿಟ್ಟಿಸಿ ನೋಡುತ್ತಿದೆ, ಲೈಟ್ ಆನ್ ಮಡಿದ ಕ್ಷಣದಲ್ಲಿ ಅದರ ಕಂಗಳು ವಜ್ರದಂತೆ ಹೊಳೆಯುತ್ತಿದ್ದುದೆ ಆತಂಕ, ಕೇವಲ ಕೇವಲ ಸೆಕೆಂಡ್ಗಳೂ ಕಳೆದಿರಲಿಲ್ಲ ಆ ಮಿಂಚಿನ ಕಂಗಳು ನನ್ನ ಕಂಗಲೊಡನೆ ಮಿಲನವಾಯಿತು, ಅದೇ ಗಳಿಗೆಯಲ್ಲಿ ಎಡಬಿಡದೆ ಚಂಗನೆ ಹಾರಿ ಕಿಟಕಿ ಇಂದ ಹೊರ ಹೊಡಿತು. ಇಲ್ಲಿಯ ತನಕ ಏನು ತಿಳಿಯದೆ, ಏನನ್ನೂ ಯೋಚಿಸದೆ ಇದ್ದ ನನ್ನ ಮನಸ್ಸು ಮನೆಯಲ್ಲಿ ನನ್ನ ಏಕಾಂಗಿತನದ ಭಯ ಹೆಚ್ಚಿಸಿತು. ಕೆಳಗೆ ಕಂಡ ಆಕೆಯ ಭಯಾನಕ ಮಾಯ, ಮನೆಯ ಒಳಗೆ ಬೆಕ್ಕು ಇದೆಲ್ಲ ಸೇರಿ ಭೂತವೇ ಇರಬಹುದು ಎಂದು ತಾತ, ಅಜ್ಜಿ ಹೇಳಿದ ದೆವ್ವ ಹೆಣ್ಣಿನ ರೂಪದಲ್ಲಿ ಮತ್ತು ಬೆಕ್ಕಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎಬುದೆಲ್ಲ ನೆನಪಾಗಿ ನನ್ನ ಮೈ ನಡುಗಲಾರಬಿಸಿತು. ಭಯ ಹೆಚ್ಚಾಗಿ ಬೆವರಿಳಿಯುತ್ತಿದೆ, ಅಡಿಗೆ ಮನೆಗೆ ಹೋಗಿ ಒಂದು ಲೋಟ ನೀರು ಕುಡಿದು ಫ್ಯಾನ್ ಜೋರಾಗಿ ಹಾಕಿ ಕುಳಿತೆ, ಆದರೂ ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಶಬ್ದವಾದರೂ ನನ್ನ ಹೃದಯ, ಮನಸ್ಸು ಗಾಬರಿಯಾಗಿ ಚೆಲ್ಲಪಿಲಿಯಾಗಿ ಓಡಾಡುತ್ತಿದ್ದವು.

ನಂಗೆ ನಾನೇ ಸಮಾಧಾನ ಮಾಡಿಕೊಂಡು ಬಾಗಿಲು ತೆರೆದು ಆಚೆ ಬಂದು ಸೀಟ್ಔಟ್ ನಲ್ಲಿ ಕುಳಿತೆ, ಮನೆಯಲ್ಲಿ ಯಾರು ಇಲ್ಲದ ಕಾರಣ ಏಕಾಂಗಿ ತನದ ಭಯ ಆವರಿಸಿತ್ತು, ಹಾಗೆ ನನ್ನ ಪ್ರಿಯತಮೆಯೊಂದಿಗಿನ ಮುನಿಸು ಕೂಡ ಒಂದು ಕಾರಣ ಇರಬಹುದು. ಅವಳ ಜೊತೆ ಮಾತಾಡಿದ್ರೆ ಸರಿ ಹೋಗ್ತಿನಿ ಅಂದುಕೊಂಡೆ ಆದ್ರೆ ಅದು ಸರಿ ಸಮಯವಾಗಿರಲಿಲ್ಲ. ಮತ್ತೊಂದು ಹೆದರಿಕೆಯುಂಟು ಮಾಡಿದ ಸಂಗತಿ ಎಂದರೆ,ಆಚೆ ಕುಳಿತು ಆಕಾಶ ನೋಡಿದೆ ಚಂದಿರನ ಸುಳಿವಿರಲಿಲ್ಲ ಆಗಲೇ ನಂಗೆ ಅರಿವಾದದ್ದು ಇಂದು ದೀಪಾವಳಿಯ ಅಮಾವಾಸ್ಯೆ. ಅಮಾವಾಸ್ಯೆಯ ಕಗ್ಗತ್ತಲ ರಾತ್ರಿಯಲ್ಲಿ ಒಬ್ಬನೇ ನಡುಕದಿಂದ ಕುಳಿತಿದ್ದೆ, ಸುತ್ತ ನೋಡುತ್ತಿದ್ದೇನೆ ಘೋರ ಕತ್ತಲೆ, ಬೀದಿ ದೀಪಗಳು ಅಲ್ಲಲ್ಲಿ ಉರಿಯುತ್ತಿವೆ ಒಂದೇ ಒಂದು ಶಬ್ದ ಕೇಳುತ್ತಿಲ್ಲ, ನಿಶ್ಯಬ್ಧ ನನ್ನ ಎದೆಯನ್ನ ಸೀಳಿ ಮುನ್ನುಗ್ಗುತ್ತಿದೆ ಭಯದ ಮುಖ ಬಾಡಿ ಬರಡಾಗಿದೆ. ನನ್ನ ಪಾಲಿಗೆ ಯಾರು ಇಲ್ಲವಲ್ಲ ಅಂತ ದುಃಖ ಹೆಚ್ಚುತಿದೆ...ನನ್ನ ಮನವನ್ನ ನನ್ನ ಕೈಲೇ ಹತೋಟಿಗೆ ತರಲು ಸಾಧ್ಯ ಅಂತ ಯೋಚಿಸಿ, ೫ ನಿಮಿಷಗಳ ಹಿಡಿತದ ಉಸಿರಾಟದಿಂದ ಹತೋಟಿಗೆ ತಂದು ನಂತರ ಮನೆಯ ಒಳಗೆ ಬಂದು ಡೋರ್ ಲಾಕ್ ಮಾಡಿ, ಬೆಡ್ ರೂಂ ನ ಕಿಟಕಿ ಬಂದ್ ಮಾಡಿ, ಲೈಟ್ ಆಪ್ ಮಾಡಿ ಮಲಗಲು ಬಂದೆ ಚಳಿ ಜಾಸ್ತಿ ಅನ್ನಿಸುತಿತ್ತು, ಫ್ಯಾನ್ ಸ್ವಲ್ಪ ಕಮ್ಮಿ ಮಾಡಿ ನಾನಗೆ ನಾನೇ ಗುಡ್ ನೈಟ್ ಹೇಳಿ ಮಲಗಿದೆ. ಇನ್ನೇನು ಕಣ್ಣು ಕಟ್ಟುವ ಸಮಯ ನನ್ನ ಮನೆಯ ಬಾಗಿಲು ಜೋರಾಗಿ ಬಡಿಯಲಾರಂಭಿಸಿತು, ಯಾರೋ ಹೊರಗಡೆಯಿಂದ ಜೋರಾಗಿ ಹೊಡೆಯುತ್ತಿದ್ದರು, ೩೦ ಸೆಕೆಂಡ್ ಗಳ ಸಮಯ ಸತತವಾಗಿ ಬಡಿಯುತ್ತಿದ್ದರೆ, ಇನ್ನ ಸೂಸು ಮಾಡುವುದು ಒಂದೇ ಬಾಕಿ, ಏನು ಮಾಡುವುದು ತಿಳಿಯುತ್ತಿಲ್ಲ, ಭಯ ಅಂದ್ರೆ ಇದೇನಾ ಅಂತ ಯೋಚಿಸುತ್ತಿದ್ದೇನೆ, ಬಾಗಿಲ ಬಡಿತ ನಿಂತಿತು, ಗಾಬರಿಯಾಗಿ ಇರುವ ಎಲ್ಲ ಲೈಟ್ ಗಳನ್ನೂ ಆನ್ ಮಾಡಿ ನಂತರ ಅಡಿಗೆ ಮನೆಗೆ ಹೋಗಿ ಚಾಕು ತೆಗೆದು ಬಂದು ಡೋರ್ ಓಪನ್ ಮಾಡಿದೆ.....!!!! ಯಾರು ಇಲ್ಲ., ಎಲ್ಲ ಹುಡುಕಾಡುತ್ತಿದ್ದೇನೆ ಯಾರು ಇಲ್ಲ, ಯಾರು ಯಾರು ಎಂದು ಕಿರುಚಿತ್ತಿದ್ದೇನೆ ಯಾರು ಇಲ್ಲ ಹಣೆಯ ಮೇಲೆ ಬೆವರು ಹೆಚ್ಚುತ್ತಿದೆ, ಬಾಯಿ ಒಣಗಿದೆ, ನರಗಳು ಎಳೆಯುತ್ತಿವೆ, ಕೆಳಗೆ ಹೋಗಿ ನೋಡೋಣ ಅಂತ ಯೋಚಿಸಿ ಬಂದು ನೋಡಿದೆ ಗೇಟ್ ಲಾಕ್ ಆಗೇ ಇದೆ. ದೇಹದ ಎಲ್ಲ ನರಗಳೂ ನಡುಗಲಾರಂಭಿಸಿದವು, ಮೆಟ್ಟಿಲೇರಲು ಕಾಲುಗಳು ಬರುತ್ತಿಲ್ಲ, ಬಾಯೆಲ್ಲಾ ಒಣಗಿದೆ, ಕೆಳಗಿನ ಮನೆಯ ಓನರ್ ಅಂಕಲ್ ನ ಎಬ್ಬಿಸೋಣ ಅಂತ ಒಂದು ಕ್ಷಣ ಯೋಚಿಸಿದೆ, ಆದರೆ ಅವರಿಗೆಲ್ಲಾ ಯಾಕೆ ತೊಂದರೆ ಅಂತ ಸ್ವಲ್ಪ ಹೊತ್ತು ಅಲ್ಲೇ ಮೆಟ್ಟಿಲ ಮೇಲೆ ಕುಳಿತೆ ನಂತರ ಮನೆಗೆ ಬಂದೆ... ಪೂರ್ತಿ ಭಯ ಅ ಕ್ಷಣಕ್ಕಾಗಲೇ ನನ್ನ ಆವರಿಸಿತ್ತು, ಅದೂ ಎಕಾಂಗಿಯಾಗಿದ್ದುದೆ ಮತ್ತೊಂದು ಕಾರಣ.
ಎಲ್ಲ ಲೈಟ್ ಗಳನ್ನ ಉರಿಯಲು ಬಿಟ್ಟು ಚಾಕುವನ್ನು ನನ್ನ ದಿಂಬಿನ ಕೆಳಗೆ ಇತ್ತು ಮಲಗಿದೆ, ನಿದ್ದೆ ಬರುತ್ತಿಲ್ಲ, ಭಯ ಏನು ಮಾಡುವುದು ಗೊತ್ತಾಗುತ್ತಿಲ್ಲ, ಮನಸಿಗೆ ಭಯ ಬಿಟ್ರೆ ಬೇರೇನೂ ತಿಳಿಯುತ್ತಿಲ್ಲ, ಹಾಗೆ ಮಲಗಿ ಪೇಪರ್ ಓದುತ್ತ ಮಲಗಿದೆ, ಕೊನೆಗೂ ಸುಖ ನಿದ್ರೆ, ಲೈಟ್ ಆನ್ ಆಗಿತ್ತು ಪೇಪರ್ ನನ್ನ ಮುಖದ ಮೇಲೆ, ನಾನು ತುಂಬಾ ಜೋರಾದ ನಿದ್ದೆಯಲ್ಲಿದ್ದೆ.ಹಾಗೆ ನಿದ್ದೆಯಲ್ಲಿದ್ದವ ೧೮೦ ಡಿಗ್ರಿ ಆಂಗಲ್ ನಲ್ಲಿ ಬೆಡ್ ನಿಂದ ಜಿಗಿದು ಎಷ್ಟು ಜೋರಾಗಿ ಚೀರಲು ಆಗುತ್ತೋ ಅಷ್ಟೇ ಜೋರಾಗಿ ಪ್ರಾಣಭಯದಿಂದ ಎದ್ದು ನಿಂತಿದ್ದೇನೆ, ಮೈ ಕೈ ಎಲ್ಲ ನಡುಗುತ್ತಿವೆ. ಮೈ ರೋಮವೆಲ್ಲ ನೆಟ್ಟಗಾಗಿವೆ, ಹ್ರುದಯಾಗಾತದಿಂದ ಪಾರಾಗಿದ್ದೇನೆ, ನಾ ಚೀರಿದ ಶಬ್ಧಕ್ಕೆ ಅಕ್ಕ ಪಕ್ಕದ ಮನೆಯವರೆಲ್ಲಾ ಲೈಟ್ ಆನ್ ಮಾಡಿದ್ದರೆ, ಅದು ಹೇಗೆ ಚಾಕು ನನ್ನ ಕೈಗೆ ಬಂತೋ ಗೊತ್ತಿಲ್ಲ ಚೀರುತ್ತಾ ಇದ್ದಾಗ ಅದೆಷ್ಟು ಬೇಗ ದಿಂಬಿನ ಕೆಳಗಿಂದ ಚಾಕು ತೆಗೆದು ಕಲಿ ಇದ್ಕೊಂಡಿದ್ದೆ ಅಂತ ಇನ್ನೂ ನಂಗೆ ಗೊತ್ತಿಲ್ಲ, ಇ ರೀತಿ ಚೀರಲು ಕಾರಣವೇನು ಗೊತ್ತೇ, ಕೆಟ್ಟ ಕನಸಲ್ಲ, ಕನಸು ಕಾಣಲು ನನಗಿದು ಸಮಯವೂ ಅಲ್ಲ. ಒಂದು ವರ್ಷಗಳ ಹಿಂದೆ ವಾಟರ್ ಫಿಲ್ಟರ್ ತಂದಿದ್ದ ಬೊಕ್ಷ್ನ ಅಡಿಗೆ ಮನೆ ಮೇಲೆ ಇರುವ ಸಜ್ಜದಲ್ಲಿ ಮೂಲೆಯಲ್ಲಿ ಇಟ್ಟಿದ್ದೆ, ಅದು ಇವತ್ತು ರಾತ್ರಿ ಬಿಟ್ಟು, ಅದೂ ಜೊತೆಗೆ ಚೆಂಬು, ತಟ್ಟೆಗಳನೆಲ್ಲ ಅದರ ಜೊತೆ ಸೆಲ್ಫ್ ಮೇಲಿಂದ ತನ್ನೊಡನೆ ಬೀಳಿಸುತ್ತಾ ಒಂದೇ ಸೆಕೆಂಡ್ ಶಂಬ್ದ ದಬ್ಬ ಅಂತ ಬಾಕ್ಸ್ ದು ಮತ್ತೆ ತಟ್ಟೆಗಲದ್ದು ಮತ್ತೆ ಅದೇ ಸೆಕೆಂಡ್ ನಲ್ಲಿ ನನ್ನ ಚೀರಾಟ.
ಮತ್ತೊಂದು ಮಗದಾಶ್ಚರ್ಯ ಎಂದರೆ ಬಾಕ್ಸ್ ೧೦ ಅಡಿಗಳ ಸಜ್ಜದಿಂದ ಕೆಳಗೆ ಬಿದ್ದಾಗ ಚೆಲ್ಲಾಪಿಲ್ಲಿಯಾಗಿಲ್ಲ, ಸ್ವಲ್ಪನೂ ಅಳುಗಾದಿಲ್ಲ, ನಾವು ಹೇಗೆ ಜೋಪಾನವಾಗಿ ಅದನ್ನ ಮೇಲ್ಮುಖವಾಗಿ ಇದುತ್ತೆವೋ ಹಾಗೆ ಇದೆ, ನಾನು ತುಂಬಾ ಭಯಭೀತನಾಗಿದ್ದೇನೆ, ಬಯೋನಗಿದೆ, ಉಸಿರು ಕಟ್ಟುತ್ತಿದೆ, ನೀರು ಬೇಕು ನೀರು ಬೇಕು ಆದರೆ ಅಡಿಗೆ ಮನೆಗೆ ಹೋಗಲು ಭಯ, ಫುಲ್ ಹೆದರಿದ್ದೇನೆ, ನನ್ನ ಪ್ರಾಣಕ್ಕೆ ಕುಂದು ತರುವ ರಾತ್ರಿ ಅಂತ ಅರಿವಾಗುತ್ತಿದೆ,ನನಗೆ ಹೊಳೆದದ್ದು ಮೊಬೈಲ್ ಫೋನ್, ಅದನ್ನು ಎತ್ತಿಕೊಂಡು ಗಾಬರಿ ಇಂದ ಡಯಲ್ ಮಾಡಲು ಯೋಚಿಸುತ್ತಿದ್ದೇನೆ, ಆದರೆ ಯಾರಿಗೆ ಮಾಡೋದು????ಸಮಯ ಮಧ್ಯ ರಾತ್ರಿ ೧:೪೫ ಆಗಿದೆ, ಮನಸಿಗೆ ಹೊಳೆದದ್ದು ಇವಾಗ ತಾನೇ ಬಿಟ್ಟು ಬಂದಿದ್ದ ಗೆಳೆಯ ಸುಧೀರ್. ಅವನಿಗೆ ಫೋನ್ ಮಾಡಿದೆ, ಅವನು ಸಧ್ಯ ಫೋನ್ ರಿಸೀವ್ ಮಾಡಿದ,
ಸುಧೀರ್: ಹೇಳೋ ಮಗ ಅಂದ ಫುಲ್ ನಿದ್ದೆ ಮೂಡ್ ನಲ್ಲಿ,
ನಾನು: ಘಾಬರಿ ಧನಿಯಲ್ಲಿ ನಡುಗುತ್ತಾ ಹೆಲೋ ಎಂದೇ,
ಸುಧೀರ್: ಮತ್ತೆ ಅವನು ಎನೈತು ಏನಾದ್ರು ಕೆಟ್ಟ ಕನಸ್ಸು ಬಿತ್ತಾ ಅಂದ,
ನಾನು: ಏನಿಲ್ಲ ಮಗ ಹಾಗೆ ಘಬರಿ ಆಯಿತು ಅಷ್ಟೇ ಅಂತ ಹೇಳಿದೆ,
ಸುಧೀರ್: ಯಾಕೆ ಅಂದ??
ನಾನು: ಹಾಗೆ ಸುಮ್ಮನೆ, ಅಡಿಗೆ ಮನೇಲಿ ಬಾಕ್ಸ್ ಬಿಟ್ಟು ಮೇಲಿಂದ ಅದಕ್ಕೆ ಅಷ್ಟೇ ಏನಿಲ್ಲ ಮಲ್ಕೋ ಅಂತ ಹೇಳಿದೆ,
ಸುಧೀರ್: ಸರಿ ಮಲ್ಕೋ ಮಗ ಗುಡ್ ನೈಟ್, ಘಾಬರಿ ಆಗಬೇಡ ಅಂತ ಹೇಳಿ ಕಾಲ್ ಕಟ್ ಮಾಡಿದ.
ಅಷ್ಟೊತ್ತಿಗೆ ನನ್ನ ಮನಸ್ಸು ಬೇರೆ ಕಡೆ ಡೈವರ್ಟ್ ಆಗಿತ್ತು, ಕಾಲ್ ಕಟ್ ಆದ ಗಳಿಗೆಯಲ್ಲೇ ಕೊನೆಯ ಕಡೆ ನನ್ನ ಮನಸ್ಸು ಹರಿಯಿತು, ಭಯ ಶುರುವಾಯಿತು. ಆದರೂ ಸ್ವಲ್ಪ ನಿದಾನವಾಗಿ ಅಡಿಗೆ ಮನೆ ಕಡೆ ಹೊರಟೆ, ಅಲ್ಲಿ ಎಲ್ಲ ತಟ್ಟೆಗಳನ್ನ ಮತ್ತು ಲೋಟಗಳನ್ನ ಬಾಕ್ಸ್ ಒಳಗೆ ಹಾಕಿ ಕಾಲಲ್ಲಿ ಮೂಲೆಗೆ ಬಾಕ್ಸ್ ಸರಿಸಿ ಬಂದು,
ಅನಿಸಿತು ಬೇರೆ ಫ್ರೆಂಡ್ಸ್ ಜೊತೆ ಮಾತಾಡಿದರೆ ಮನಸ್ಸು ಡೈವರ್ಟ್ ಆಗುತ್ತೆ ಅಂತ ಮಹೇಶ್ ಗೆ ಕಾಲ್ ಮಾಡಿದೆ ಆದರೆ ಅದೇನೋ ಅಂತಾರಲ್ಲ ಅದೃಷ್ಟ ಕೈ ಕೊಟ್ರೆ ಏನು ಇರಲ್ಲ ಜೊತೆ ಅಂತ, ನೀವು ಕರೆ ಮಾಡಿದ ಚಂದಾದಾರರು ಹೊರವಲಯದಲ್ಲಿದ್ದಾರೆ ಅಂತ ಸಿಗಲಿಲ್ಲ.ಕೊನೆಗೆ ನನಗೆ ಬದುಕಲು ಉಳಿದದ್ದು ಒಂದೇ, ನಾ ನಂಬಿದ ದೇವರು.....ಗಣೇಶನ ಫೋಟೋ ಮುಂದೆ ಬಂದು ನಿಂತು ಕಣ್ಣೀರು ಇಡಲು ಪ್ರಾರಂಭಿಸಿದೆ, ಮೈ ಎಲ್ಲ ನಡುಗುತ್ತಿದೆ, ಆದರು ಸ್ನಾನದ ಮನೆಗೆ ಹೋಗಿ ಮುಖ ತೊಳೆದು, ಅಡಿಗೆ ಮನೆಗೆ ಹೋಗಲು ಭಯ ಆಗುತ್ತಿದ್ದರಿಂದ ಅದೇ ನೀರು ಕುಡಿದು ಬಂದು ದೇವರ ಮುಂದೆ ಮಂದಗತಿಯಲ್ಲಿ ಉಸಿರಾಡುತ್ತಾ ಕುಳಿತೆ, ಇಪ್ಪತ್ತು ನಿಮಿಷಗಳ ಕಾಲ ಸತತ ನನ್ನ ಸಂಪೂರ್ಣ ಮನಸನ್ನು ನನ್ನ ಉಸಿರಾಟದ ಮೇಲೆ ನಿಗಾ ಇರಿಸಿ ನಂತರ ದೇವರ ಧ್ಯಾನದಲ್ಲಿ ಮಗ್ನನಾದೆ. ಆಮೇಲೆ ನಿದಾನವಾಗಿ ಮೇಲೆದ್ದಾಗ ಸ್ವಲ್ಪ ನನಗೆ ಸಮಾಧಾನ ಎನ್ನಿಸಿತು, ಮತ್ತೆ ಬೆಡ್ ರೂಂ ಲೈಟ್ ಆಫ್ ಮಾಡಿದೆ, ಅಡಿಗೆ ಮನೆ ಲೈಟ್ ಆಫ್ ಮಾಡಿದೆ, ಸ್ನಾನದ ಮನೆ ಲೈಟ್ ಆಫ್ ಮಾಡಿದೆ, ಹಾಲ್ ನ ಲೈಟ್ ಮಾತ್ರ ಉರಿಯಲು ಬಿಟ್ಟು, ಫ್ಯಾನ್ ಜೋರು ಮಾಡಿ ಮಲಗಿದೆ.ಬೆಳಿಗ್ಗೆ ಎದ್ದಾಗ ಮೊದಲು ನೋಡಿದ್ದು ನನ್ನ ಉಸಿರು, ಓಹ್ ದೇವರೇ ನಾನು ಇನ್ನ ಬದುಕಿದ್ದೇನೆ, ಬೆಳಿಗ್ಗೆ ಎದ್ದಾಗ ಸುಮಾರು ೯ ಘಂಟೆ ಆಗಿತ್ತು, ನನಗೆ ಎಲ್ಲಾ ನಾರ್ಮಲ್ ಆಗೇ ಇತ್ತು ಆದರೆ ಅಡಿಗೆ ಮನೆ ಬಿಟ್ಟು, ಮತ್ತೆ ಆಕೆಯ ಮುಖ ಮತ್ತು ಬೆಕ್ಕಿನ ಕಣ್ಣುಗಳು ನನ್ನ ಎದೆಯಲ್ಲಿ ಇನ್ನೂ ದುಗುಡ ಹಿಡಿಸುತ್ತಿವೆ.ಭಯ ಅಂದ್ರೆ ಇದೇನಾ?? ಅದು ಪ್ರಾಣ ಭಯ ಅಂದ್ರೆ ಇದೇನಾ??? ಅದನ್ನು ಅನುಭವಿಸಿದರೆ ಮಾತ್ರ ಅದರ ಅರ್ಥ ತಿಳಿಯೋದು....
ದೇವರೇ ಕಾಪಾಡಿದ ಎನ್ನ.

- ಕೆ ಎಸ್ ರಾಜು


Tuesday, August 11, 2009

ಮನಸ್ಸು

ಕಳೆಯಲು ಬಯಸುತಿದೆ ಮನಸ್ಸು ನಿನ್ನ ಜೊತೆ
ಒಂದು ದಿವ್ಯ ಸಂಜೆ

ಆಕಾಶವು ತಿಳಿಯಾದಾಗ,
ಸಮುದ್ರ ಶಾಂತವಾದಾಗ
ಕನಸಿಗೆ ಚುಂಬಿಸಿದ ಪ್ರೀತಿಯ ಸಂಜೆ

ಮನಸಿನ ಮಾತು ಕೇಳದಾದಾಗ,
ಹೃದಯದ ಬಡಿತ ಜೋರಾದಾಗ
ತಂಗಾಳಿಯ ತೋಳಲಿ ಅಡಗಿದ ಸಂಜೆ

ನಿನ್ನೆದೆ ನೋವಿಗೆ ಸ್ಪಂಧಿಸಿದಾಗ,
ಈ ಮನಸಿನ ಕದವ ನೀ ತೆರೆದಾಗ
ಬೆಚ್ಚಗೆ ಇಡುವ ಮುತ್ತಿನ ಸಂಜೆ

ಕಣ್ಣೀರಲಿ ನಗುವ ನೀನಿಟ್ಟಾಗ,
ಮೌನವೇ ಮಾತು ಕಲಿತಾಗ
ಹರಳಿದ ಹೂವಿನ ಅದ್ಭುತ ಸಂಜೆ


-ಕೆ ಎಸ್ ರಾಜು





Sunday, August 2, 2009

ಸಾಕೆನಗೆ

ಅತ್ತಿಂದಿತ್ತ ಸಂಚರಿಸುತಿರಲು ಬೆಳ್ಳಿ ಮೋಡಗಳು
ತಂಗಾಳಿ ನಿನಗೇಕೆ ಚಂದಿರನ ಕಾವಲು
ಎಲ್ಲಿರುವಳೋ ನನ್ನಾಕೆಯ ನಾ ಹುಡುಕಲು
ಬೇಕಾಗಿದೆ ಹಾಲ್ಗೆನ್ನೆಯ ಬೆಳದಿಂಗಳು

ಅಡಗಿದೆ ನಿನ್ನೆದೆಯ ಹೆಸರಲಿ ಪವಿತ್ರತೆ
ಅದನಿಡಿದು ನಾ ಕುಳಿತೆ ಬರೆಯಲು ಸ್ನೇಹದ ಗೀತೆ
ನಿನ್ನೊಡಗಿನ ಸರಸ ಸಲ್ಲಾಪಗಳ ಈಗಲೇ ಅರಿತೆ
ಮನವರಿಯದೆ ನಿನ್ನ ಪ್ರೇಮದಾಟದಲಿ ನಾ ಸೋತೆ

ಅನಿಸು, ಮುನಿಸುಗಳ ನೀ ಹೇಳುತಲಿರಲು
ಮತ್ತೆ ಮತ್ತೆ ನಿನ್ನ ನಾ ನೋಯಿಸುತಲಿರಲು
ನೀನೊಂದು ಒಲವೋ, ವಿಷ್ಮಯವೋ ನಾ ಅರಿಯೇ
ಇಂದೇಕೋ ಮನ ಕುಣಿದಾಡುತಿದೆ ಅದು ಸಾಕೆನಗೆ,ಅದು ಸಾಕೆನಗೆ

-ಕೆ ಎಸ್ ರಾಜು

Wednesday, July 8, 2009

ನಿನಗಾಗಿಯೇ.. ನಿನದಾಗಿದೆ

ಪ್ರೀತಿ ನನ್ನಲ್ಲೇನಿದೆ
ಈ ಜೀವನವೇ ಅದಾಗಿದೆ
ನಿಂತಂತೆ ನಿನ್ನಲ್ಲೇ, ನಿನಗಾಗಿಯೇ.. ನಿನದಾಗಿದೆ

ಗಿರಿಯ ಮೇಲೆ ನಾ ನಿಂತು
ತಂಗಾಳಿಯ ತಂಪನ್ನು ನಾ ತಡೆಯೆ!
ಆ ನಿನ್ನ ಶೃಂಗಾರ ಚಿತ್ರವು ಮೂಡಿ
ನಿಂತಂತೆ ನಿನ್ನಲ್ಲೇ, ನಿನಗಾಗಿಯೇ.. ನಿನದಾಗಿದೆ

ಸಾಗರವು ಕ್ಷಣಕಾಲ ಅಡಗಿದಂತೆ ಹಿಮದ ಹಿಂದೆ
ಬಣ್ಣಗಳು ಬೆರೆತಂತೆ ಕಾಮನ ಬಿಲ್ಲಿನ ನಡುವೆ
ಕ್ಷಣಾರ್ಧದಿ ಮಿಂಚಂತೆ ಮೂಡಿದಾಗ ಪ್ರೀತಿ
ನಿಂತಂತೆ ನಿನ್ನಲ್ಲೇ, ನಿನಗಾಗಿಯೇ.. ನಿನದಾಗಿದೆ

ಮುಗ್ಧನ ಮೊಗವೊಂದು ನನದಲ್ಲ
ಅಂದದ ಜಿಂಕೆಯ ಕಂಗಳು ನನಗಿಲ್ಲ
ತಿಳಿಯಾದ ಹಾಲ್ಕೆನೆಯ ಈ ಮನದ ಪ್ರೀತಿ
ನಿಂತಂತೆ ನಿನ್ನಲ್ಲೇ, ನಿನಗಾಗಿಯೇ.. ನಿನದಾಗಿದೆ

- ಕೆ ಎಸ್ ರಾಜು

Tuesday, July 7, 2009

ತುಣುಕು

ನಾನ್ ಕಣೇ ರಸಿಕ
ನಿನ್ನ ಮನದಲ್ಲೇಕೆ ಪುಳಕ
ಬಾಚಿ ಮುತ್ತೊಂದಿಟ್ಟರೆ ಕ್ಷಣಿಕ
ಕಾಣುವುದಲ್ಲೇ ಸ್ವರ್ಗ ಅಥವಾ ನರಕ

- ಕೆ ಎಸ್ ರಾಜು

Tuesday, April 14, 2009

ನೋವಿನ ಅರ್ಥ

ನೋವಲ್ಲೂ ನೋವು ಕೊಡುವ
ನೋವೆಂದರೆ ಅರ್ಥೈಸುವ
ಈ ಪ್ರೀತಿಯ ಹೃದಯ,
ಸತ್ತರೂ ಬದುಕಿದ್ದಂತೆ ನಗು-ನಗುತ್ತಲೇ
ನೋವನುಭವಿಸುವ ಈ ಹುಡುಗರು

ನಗುತ್ತಿದ್ದಾಗ ನೋವುಣಿಸುವ,
ಪ್ರೀತಿ ಅಂತ ಎದೆ ತಟ್ಟಿ ಕಣ್ಣೀರಿಡುವ
ಈ ಪ್ರೀತಿಯ ಗೆಳತಿ,
ಬದುಕಿದ್ದಾಗಲೂ ನಗು-ನಗುತ್ತಲೇ ಸಾಯಿಸಿ
ಆನಂದಿಸುವ ಈ ಹುಡುಗಿಯರು

ನೀ ನನಗೆ ಸ್ವಂತ,
ನಾ ನಿನ್ನ್ನೊಬ್ಬನಿಗೆ ಸ್ವಂತ ಎಂದು ಚೀರುವ
ಈ ಪ್ರಿಯತಮೆಯ ಮನಸ್ಸು,
ಪ್ರೀತಿಯ ಉಸಿರು ಇದ್ದಾಗಲೇ, ಹೃದಯ ಹೊಡೆದು, ಬೇರೆಡೆಗೆ ಮನಜಾರಿ
ಕ್ಷಣ ಮಾತ್ರದಲಿ ಮರೆಯುವ ಈ ಪ್ರಿಯತಮೆಯರು

ನೀ ಕೊಟ್ಟಿದ್ದು ನೋವೋ! ನಲಿವೋ!
ಇಂದಿಗೂ, ಎಂದೆಂದಿಗೂ ನಾ ನಿನ್ನ ಪ್ರೀತಿಸುವೆ,
ಸಿಹಿ ಕಹಿಗಳ ಮಿಲನವೇ ಈ ಜೀವನ ಎಂಬಂತೆ
ನಿನ್ನ ಪ್ರೀತಿಯ ಸಿಹಿಯಲಿ ತೇಲಾಡಿ, ಇಂದು ಕಣ್ಣೀರಿನ ಕಹಿ ದಡ ಸೇರಿದ ಅನುಭವಕ್ಕೆ
ನಾನೆಂದೂ, ಎಂದೆಂದೂ ನಿನಗೆ ಚಿರಋಣಿ

ಇಂತಿ ನಿನ್ನವ,
- ಕೆ ಎಸ್ ರಾಜು

Monday, February 9, 2009

ನನ್ನೆದೆಯ ನೋವು

ಸಧ್ಯದಲ್ಲೇ ನಿಮ್ಮ ಮುಂದೆ "ನನ್ನೆದೆಯ ನೋವು"
ಇದೊಂದು ಕಲ್ಪನೆಯೋ?? ಅನುಭವವೋ?? ನೀವೇ ನೀಡಬೇಕಾದ ಉತ್ತರ.