Tuesday, June 24, 2008

ಪ್ರೀತಿ ಎಷ್ಟು ಮಧುರ

ರವಿಯಾಗಿ ನಿನ್ನ ಬಾಳ ಬೆಳಗಲೆಂದು ಬಂದೆ
ತಂಗಾಳಿಯಾಗಿ ನೀ ನನ್ನ ಚಂದಿರನಾಗಿಸಿದೆ
ಕಲ್ಲು ಬಂಡೆಯಾಗಿ ಕರಗದೇ ಕುಳಿತಿದ್ದೆ
ಚೆಲುವೆ ಅಲೆಯಾಗಿ ನೀ ಬಂದು ಮುದ್ದಿಸಿದೆ
ನಿನ್ನ ಪ್ರೀತಿ ಎಷ್ಟು ಮಧುರ... ಪ್ರೀತಿ ಎಷ್ಟು ಮಧುರ ||

ಹೆತ್ತವಳ ಮಡಿಲಲ್ಲಿ ನಾನುಂಡ ಪ್ರೀತಿಯ
ಮರೆಮಾಡಿದೆ ನಿನ್ನ ಕಂಗಳ ಒಲವಿನ ಆಸರೆ
ಮೂಸಿಕನ ಮಾತಿಗೆ ಗಡಗಡ ಎನ್ನುವವ ನಾನು
ನನ್ನೀ ಜೀವವ ಅರ್ಪಿಸಿರುವೆ ಉಸಿರೇ
ನಿನ್ನ ಪ್ರೀತಿ ಎಷ್ಟು ಮಧುರ... ಪ್ರೀತಿ ಎಷ್ಟು ಮಧುರ ||


- ಕೆ ಎಸ್ ರಾಜು

2 comments:

ಅಂತರ್ವಾಣಿ said...

ಸಿದ್ದ... ಮತ್ತೊಮ್ಮೆ ಸೊಗಸಾದ ಕವನ.... :)

ನಿನ್ನ ಹಳೇ ಕವನಗಳನ್ನು post ಮಾಡು

Sudi said...

ಬಲು ಚೆಂದದ ಕವನ ... ಮತ್ತೆ ಮತ್ತೆ ಮರುಕಳಿಸು ಈ ನಿನ್ನ ಯತ್ನವ ..