Wednesday, July 23, 2008

ಆ ನಿನ್ನ ನೆನಪು

ಮೊದ ಮೊದಲು ನಿನ್ನೊಡನಿಟ್ಟ ಹೆಜ್ಜೆಯ ತಲ್ಲಣದಿ
ನಾಚಿ ನದಿ ಸೇರಿದೆ ಈ ಭೂಮಿಯ ಕಂಪನ
ನಾಡಿಯ ನೆತ್ತರು ನಿಂತಂತಾಗಿ ಒಂದು ಕ್ಷಣ
ಪ್ರತಿ ಗಳಿಗೆಯೂ ಮಾಡಿದೆ ಆ ದಿನಗಳ ಗುಣಗಾನ ||

ನೀ ನುಡಿದ ಪ್ರೆಮಸ್ವರ, 'ನಿನ್ನವಳೇ ನಾನೆಂದೂ..,ಎಂದೆದೂ'!
ಕಾಲಚಕ್ರ ಉರುಳಿದಂತೆ ನಿನಗೀಗ ನೆನಪಾಗದೇ? ಅಂದಿನ ರಾಗ
ಇದು ಮೋಕ್ಷವೋ?... ಮುಕ್ತಿಯೋ?...ತಿಳಿಯದೆ ಸತ್ತಿದೆ ನನ್ನುಸಿರು
ಬಾಡಿದ ಮನಸು ಕಾದಿದೆ ಹಸಿಯಾಗುವುದೆಂದು ಉಸಿರು||

ವಜ್ರ ಒಡವೆಯ ಹರಳಿನಂತೆ ಕೂಡಿಟ್ಟ ಕನಸುಗಳು
ಮುಂಜಾನೆಯ ರವಿ ನೋಡದ ಕಮಲವೊಂದರ ಮೊಗದಂತಾಯಿತೆ
ತೃಣ ಸ್ಪರ್ಶ ದೊರೆಯದ ಮಂಜಿನ ಹನಿಯ ನೋವಲ್ಲಿ ಸೇರಿ
ಉಸಿರುಳಿಸಿದೆ ಕೊನಿಗೂ ಆ ನಿನ್ನ ನೆನಪು ... ಆ ನಿನ್ನ ನೆನಪು||


- ಕೆ ಎಸ್ ರಾಜು

2 comments:

ಅಂತರ್ವಾಣಿ said...

kone saalugaLu tumbaa chennagide :)

ajay said...

thumba thumba feel ago ninna bhavanegalu na