Monday, June 2, 2008

ಪ್ರೇಮಿಗಳಿಗೆ ಪಿಸುಮಾತು

ಝುಳು ಝುಳು ಹರಿಯುವ ನೀರಿನ ಮೇಲಿನ ಗುಳ್ಳೆ
ಸೇರಿದೆ ಈ ಮನುಕುಲದ ಉಸಿರಿನಲಿ
ಪ್ರೀತಿ ಅಂತ ನುಡಿದ ಮಾತ್ರಕೆ, ಅವಳು ನಿನ್ನವಳಾಗಳು ಮಂಕೆ
ಎದೆಯಲ್ಲಿ ಇಟ್ಟು ಪೂಜಿಸು ಅವಳ, ನೀನಾಗುವೆ ಪ್ರೇಮಿ ||

ಎಷ್ಟು ಉಂಡರು ಸಾಲದು ಪ್ರೀತಿ
ಸವಿಸವಿಯುತ ರಸಬೀರುವ ನಿನ್ನೀ ಹೃದಯ
ಸತ್ತರೂ ಮುಗಿಯದ ನೀ ಕೊಟ್ಟ ಕನಸುಗಳು
ಪ್ರೀತಿಸುವೆ ನಾ ನಿನ್ನ ಮನಸಾರೆ, ಬಾ ನನ್ನ ಅಪ್ಪಿಕೊ ||

ಇದು ನಿಜ ಪ್ರೀತಿ, ಅದೇ ನನ್ನ ರೀತಿ
ನನ್ನೀ ಜೀವನ ಕತ್ತಲೆಯಲ್ಲಿ ಮುಳುಗಿದೆ ಗೆಳತಿ
ಬೆಳಕಾಗುವೆಯ ಈ ಬದುಕಲ್ಲಿ
ಕೈ ಹಿಡಿದು ನಡೆಸು ನನ್ನ, ಕೈ ಹಿಡಿದು ನಡೆಸು ನನ್ನ ||

-ಕೆ ಎಸ್ ರಾಜು

2 comments:

Sudi said...

ಹೃದಯದ ಮಾತನ್ನ ಕವನದ ರೂಪದಿ ನಮ್ಮ ಮುಂದಿರಿಸಿದ್ದಾನೆ ..
this is wat first impression i have buddy in my mind while reading it..

Super aagi wrote dude.. keep goin..

ಅಂತರ್ವಾಣಿ said...

ಕವಿಯ ಕಲ್ಪನೆಗೆ ಸಾಟಿಯೆ?

ಕಷ್ಟ ಪಟ್ಟು ಅರ್ಥ ಮಾಡಿಕೊಂಡೆ.
ಮೊದಲೆರಡು ಸಾಲುಗಳು ತಲೆ ತಿಂದವು...