Wednesday, July 23, 2008

ಆ ನಿನ್ನ ನೆನಪು

ಮೊದ ಮೊದಲು ನಿನ್ನೊಡನಿಟ್ಟ ಹೆಜ್ಜೆಯ ತಲ್ಲಣದಿ
ನಾಚಿ ನದಿ ಸೇರಿದೆ ಈ ಭೂಮಿಯ ಕಂಪನ
ನಾಡಿಯ ನೆತ್ತರು ನಿಂತಂತಾಗಿ ಒಂದು ಕ್ಷಣ
ಪ್ರತಿ ಗಳಿಗೆಯೂ ಮಾಡಿದೆ ಆ ದಿನಗಳ ಗುಣಗಾನ ||

ನೀ ನುಡಿದ ಪ್ರೆಮಸ್ವರ, 'ನಿನ್ನವಳೇ ನಾನೆಂದೂ..,ಎಂದೆದೂ'!
ಕಾಲಚಕ್ರ ಉರುಳಿದಂತೆ ನಿನಗೀಗ ನೆನಪಾಗದೇ? ಅಂದಿನ ರಾಗ
ಇದು ಮೋಕ್ಷವೋ?... ಮುಕ್ತಿಯೋ?...ತಿಳಿಯದೆ ಸತ್ತಿದೆ ನನ್ನುಸಿರು
ಬಾಡಿದ ಮನಸು ಕಾದಿದೆ ಹಸಿಯಾಗುವುದೆಂದು ಉಸಿರು||

ವಜ್ರ ಒಡವೆಯ ಹರಳಿನಂತೆ ಕೂಡಿಟ್ಟ ಕನಸುಗಳು
ಮುಂಜಾನೆಯ ರವಿ ನೋಡದ ಕಮಲವೊಂದರ ಮೊಗದಂತಾಯಿತೆ
ತೃಣ ಸ್ಪರ್ಶ ದೊರೆಯದ ಮಂಜಿನ ಹನಿಯ ನೋವಲ್ಲಿ ಸೇರಿ
ಉಸಿರುಳಿಸಿದೆ ಕೊನಿಗೂ ಆ ನಿನ್ನ ನೆನಪು ... ಆ ನಿನ್ನ ನೆನಪು||


- ಕೆ ಎಸ್ ರಾಜು

Friday, July 4, 2008

ಪ್ರೀತಿಯ ಮುನಿಸು

ಹೋಗುವೆಯಾ? ಉಸಿರೇ, ಹೃದಯವ ತೊರೆದು
ಹೋದಮೇಲೂ ಪ್ರೀತಿಸುವೆಯ, ಈ ಬಡ ದೇಹವ ||

ನೀನಿಲ್ಲದ ಬಾಳು, ನೆನಪಿನ ನೋವುಗಳ ಸುಡುಗಾಡು
ಎದೆ ಹತ್ತಿ ಉರಿದು ಬೂದಿಯಾಗಲೊಲ್ಲದು
ಹೋಗುವೆಯಾ? ಉಸಿರೇ, ಹೃದಯವ ತೊರೆದು ||

ಮಾಡದ ತಪ್ಪಿಗೆ ಕ್ಷಮಾಯಾಚನೆ ಬೇಕೆ
ಸ್ವಾಭಿಮಾನವ ಬಿಟ್ಟು ಬದುಕುವುದೇಕೆ
ಹೋದರೆ ಹೋಗಿಬಿಡು, ನಿನಗೀಗ ತಿಳಿಯದು ಸತ್ಯ
ಅರಿವಾದ ಗಳಿಗೆಯೇ ಬಂದೇ ಬರುವೆ ಈ ಮುದ್ದು ಮನಸಿನ ಹತ್ರ ||

ಮಾತಲಿ ಕಟ್ಟಿದ ಗೂಡಿನ ಒಳಗೆ
ಬೆಚ್ಚಗೆ ಇಟ್ಟೆ ನಿನ್ನನ್ನು
ಸಣ್ಣಗೆ ಬಂದ ಬಿರುಗಾಳಿಗೆ ಹೆದುರಿ
ತೊರೆದೆಯ ಈ ಪುಟ್ಟ ಹೃದಯವನು ||

- ಕೆ ಎಸ್ ರಾಜು.