Tuesday, June 24, 2008

ಪ್ರೀತಿ ಎಷ್ಟು ಮಧುರ

ರವಿಯಾಗಿ ನಿನ್ನ ಬಾಳ ಬೆಳಗಲೆಂದು ಬಂದೆ
ತಂಗಾಳಿಯಾಗಿ ನೀ ನನ್ನ ಚಂದಿರನಾಗಿಸಿದೆ
ಕಲ್ಲು ಬಂಡೆಯಾಗಿ ಕರಗದೇ ಕುಳಿತಿದ್ದೆ
ಚೆಲುವೆ ಅಲೆಯಾಗಿ ನೀ ಬಂದು ಮುದ್ದಿಸಿದೆ
ನಿನ್ನ ಪ್ರೀತಿ ಎಷ್ಟು ಮಧುರ... ಪ್ರೀತಿ ಎಷ್ಟು ಮಧುರ ||

ಹೆತ್ತವಳ ಮಡಿಲಲ್ಲಿ ನಾನುಂಡ ಪ್ರೀತಿಯ
ಮರೆಮಾಡಿದೆ ನಿನ್ನ ಕಂಗಳ ಒಲವಿನ ಆಸರೆ
ಮೂಸಿಕನ ಮಾತಿಗೆ ಗಡಗಡ ಎನ್ನುವವ ನಾನು
ನನ್ನೀ ಜೀವವ ಅರ್ಪಿಸಿರುವೆ ಉಸಿರೇ
ನಿನ್ನ ಪ್ರೀತಿ ಎಷ್ಟು ಮಧುರ... ಪ್ರೀತಿ ಎಷ್ಟು ಮಧುರ ||


- ಕೆ ಎಸ್ ರಾಜು

Wednesday, June 4, 2008

ನಾ ಬರೆದೆ ನಿನಗಾಗಿ

ತಿಳಿಗಾಳಿಗೆ ತಂಪಾದ ಬೆಳ್ಳಿ ಮೋಡದಂತ್ತಿದ್ದೆ
ಇಂದೇಕೋ ಮಿಂಚಂತೆ ನೀ ಬಂದೆ
ಈ ಹುಚ್ಚು ಕಂಗಳ ಒಳಗೆ ಮೊದಲೇ ಬಿದ್ದೆ
ಹಸಿಯಾಗಿ ಈ ಮಯ್ಯ ನೀ ತೋಯ್ದೆ||

ಮೊಗವೆಲ್ಲ ಎಳೆ ಹುವ್ವಾಗಿ
ಮಯ್ಯೆಲ್ಲ ಗುಲಾಬಿ ರಂಗಾಗಿ
ನನ್ಮುಂದೆ ನಾಚುತ ನಿಂತಾಗ ನೀನಾಗಿ
ಎದೆ ಝಲ್ ಝಲ್ ಎಂದು ಗಡುಸಾಗಿ ಬೀರಿದೆ ಮುದ್ದಿಸು ಒಮ್ಮೆ||

ನಿನ್ನ ಮೊಗದಲ್ಲಿದ್ದ ಆ ಕೂಸ್ ತನ
ಕಂಗಳ ಅಂಚಲಿದ್ದ ಪ್ರೀತಿಯ ಆಲಿಂಗನ
ತುಟಿ ತೆರೆದಾಗ ನೀ ನುಡಿದ ಪ್ರೇಮಗಾನ
ಜಾಸ್ತಿ ಮಾಡಿದೆ ಇಂದು ನನ್ನ ಹುಚ್ಚುತನ ||


- ಕೆ ಎಸ್ ರಾಜು

Monday, June 2, 2008

ಪ್ರೇಮಿಗಳಿಗೆ ಪಿಸುಮಾತು

ಝುಳು ಝುಳು ಹರಿಯುವ ನೀರಿನ ಮೇಲಿನ ಗುಳ್ಳೆ
ಸೇರಿದೆ ಈ ಮನುಕುಲದ ಉಸಿರಿನಲಿ
ಪ್ರೀತಿ ಅಂತ ನುಡಿದ ಮಾತ್ರಕೆ, ಅವಳು ನಿನ್ನವಳಾಗಳು ಮಂಕೆ
ಎದೆಯಲ್ಲಿ ಇಟ್ಟು ಪೂಜಿಸು ಅವಳ, ನೀನಾಗುವೆ ಪ್ರೇಮಿ ||

ಎಷ್ಟು ಉಂಡರು ಸಾಲದು ಪ್ರೀತಿ
ಸವಿಸವಿಯುತ ರಸಬೀರುವ ನಿನ್ನೀ ಹೃದಯ
ಸತ್ತರೂ ಮುಗಿಯದ ನೀ ಕೊಟ್ಟ ಕನಸುಗಳು
ಪ್ರೀತಿಸುವೆ ನಾ ನಿನ್ನ ಮನಸಾರೆ, ಬಾ ನನ್ನ ಅಪ್ಪಿಕೊ ||

ಇದು ನಿಜ ಪ್ರೀತಿ, ಅದೇ ನನ್ನ ರೀತಿ
ನನ್ನೀ ಜೀವನ ಕತ್ತಲೆಯಲ್ಲಿ ಮುಳುಗಿದೆ ಗೆಳತಿ
ಬೆಳಕಾಗುವೆಯ ಈ ಬದುಕಲ್ಲಿ
ಕೈ ಹಿಡಿದು ನಡೆಸು ನನ್ನ, ಕೈ ಹಿಡಿದು ನಡೆಸು ನನ್ನ ||

-ಕೆ ಎಸ್ ರಾಜು