Tuesday, April 1, 2008

ಮನಸಿನ ಒಳಗೆ ಸೇರ್ಕೊಂಡ್ರೆ

ಗೆಳೆಯನೊಬ್ಬನ ಮುದ್ದಿನ ಸ್ನೇಹ

ಸೇರ್ಕೊಂಡಿತ್ತು ನನ್ನಯ ಮನಸ್ಸು

ಬದುಕಿನ ಆಟಕೆ ಕ್ಷಣಗಣನೆ

ತಿನ್ನೋ ಅನ್ನಕ್ಕೆ, ಬದುಕಿನ ಜಂಜಾಟಕೆ

ಬವಣೆಯ ಭಾವನೆ ತಿಳಿದು

ದೂರ ಸರಿದ ಗೆಳೆಯನ ನೆನಪುಗಳು ಸೇರ್ಕೊಂಡಿದೆ ನನ್ನ ಮನ

ಕೂಡಿ ಕಳೆದ ಗಳಿಗೆಗಳೆಲ್ಲ

ಕುಂತರು ನಿಂತರು ಅವನ ಮಾತಿನ ತುಂತುರು

ಕಷ್ಟ ಎಂದಾಗ ಅತನಿತ್ತ ಕಣ್ಣೀರಿನ ಬಿಂಬ

ತೋರಿಸ್ತಿದೆ ಸ್ನೇಹವೆಷ್ಟು ಮಧುರ ಹಾಗೆ ಅಮರ

ಸ್ನೇಹಕ್ಕೆ ಎಂದು ಕೊನೆ ಇಲ್ಲ, ನಮ್ಮೀ ಸ್ನೇಹ ನಿಲ್ಲೋದಿಲ್ಲ

ಖುಷಿಯಾಗಿರು ನೀನು ಎಲ್ಲೇ ಇದ್ರು,

ಕ್ಲಿಷ್ಟವಾದ ಈ ಸ್ನೇಹ ಕಷ್ಟ ಆಗುತ್ತೆ ಮರೆಯೋದು

ಒಮ್ಮೆ ಮನಸಿನ ಒಳಗೆ ಸೇರ್ಕೊಂಡ್ರೆ

- ಕೆ ಎಸ್ ರಾಜು

1 comment:

ಅಂತರ್ವಾಣಿ said...

ಸ್ನೇಹಿತರಿಗೆ ಒಳ್ಳೆಯ ಉಡುಗೊರೆ!!!!!
Friend in need is a Friend in deed - ಗಾದೆ ಮಾತು. ನೀನು ಸ್ವಲ್ಪ ಜಾಸ್ತಿನೆ ಹೇಳ್ತಾಯಿದ್ದೀಯ, ನಿನ್ನ ಮಿತ್ರರ ಬಗ್ಗೆ. ಮನಸ್ಸಿನ ಒಳಗೆ ಹೊಕ್ಕರೆ ಏನು ಮಾಡಿದರು ತೆಗೆಯೋಕೆ ಆಗಲ್ಲ..