Tuesday, August 11, 2009

ಮನಸ್ಸು

ಕಳೆಯಲು ಬಯಸುತಿದೆ ಮನಸ್ಸು ನಿನ್ನ ಜೊತೆ
ಒಂದು ದಿವ್ಯ ಸಂಜೆ

ಆಕಾಶವು ತಿಳಿಯಾದಾಗ,
ಸಮುದ್ರ ಶಾಂತವಾದಾಗ
ಕನಸಿಗೆ ಚುಂಬಿಸಿದ ಪ್ರೀತಿಯ ಸಂಜೆ

ಮನಸಿನ ಮಾತು ಕೇಳದಾದಾಗ,
ಹೃದಯದ ಬಡಿತ ಜೋರಾದಾಗ
ತಂಗಾಳಿಯ ತೋಳಲಿ ಅಡಗಿದ ಸಂಜೆ

ನಿನ್ನೆದೆ ನೋವಿಗೆ ಸ್ಪಂಧಿಸಿದಾಗ,
ಈ ಮನಸಿನ ಕದವ ನೀ ತೆರೆದಾಗ
ಬೆಚ್ಚಗೆ ಇಡುವ ಮುತ್ತಿನ ಸಂಜೆ

ಕಣ್ಣೀರಲಿ ನಗುವ ನೀನಿಟ್ಟಾಗ,
ಮೌನವೇ ಮಾತು ಕಲಿತಾಗ
ಹರಳಿದ ಹೂವಿನ ಅದ್ಭುತ ಸಂಜೆ


-ಕೆ ಎಸ್ ರಾಜು





2 comments:

ಅಂತರ್ವಾಣಿ said...

ಬೇಸರದಿಂದ ನಾ ಬಂದಾಗ
ನಿನ್ನ ಕವನ ಓದಿದಾಗ
ಮನಸ್ಸಿಗೆ ಹಿತ ನೀಡಿತು ಈ ಸಂಜೆ..

Par said...

Superb dear...